Wednesday, December 28, 2011

ಆ ದಿನಗಳು...





ಕೇವಲ ಕನಸಾಗಿದ್ದ ಒಟ್ಟುಗೂಡುವಿಕೆ ಕೊನೆಗೂ ನನಸಾಗಿದೆ. ಎಸ್.ಡಿ.ಎಂ ಕಾಲೇಜು ಇತಿಹಾಸದಲ್ಲೇ ಇದು ಮೊದಲ ಪ್ರಯತ್ನ.. ಮತ್ತು ಯಶಸ್ವಿ ಕಾರ್ಯಕ್ರಮ.. ಆ ದಿನಗಳು ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ. ಕಂಡ ಕನಸುಗಳೆಲ್ಲ ನನಸಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಇಂತದ್ದೇ ಕಾರ್ಯಕ್ರಮ ಆಯೋಜಿಸಲು ಉತ್ತೇಜನ ನೀಡಿದೆ..

ತರಗತಿ ಮಿತ್ರರ ಒಂದುಗೂಡುವಿಕೆಯ ಕನಸು ಹುಟ್ಟಿದ್ದು ಜೂನ್ ತಿಂಗಳಿನಲ್ಲಿ.. ಅಂದು ನಮ್ಮ ತರಗತಿ ಮಿತ್ರರನೇಕರು ನಮ್ಮದೇ ತರಗತಿಯಲ್ಲಿ ಓದ್ತಿದ್ದ ಗೆಳತಿಯೊಬ್ಬಳನ್ನು ಭೇಟಿಯಾಗೋಕೆ ಆಕೆಯ ಮನೆಗೆ ಹೋಗಿದ್ರು. ರಾಘವ್ ಶರ್ಮ, ಪುನೀತ್, ಸ್ಟ್ಯಾನಿ, ದಾಮು, ಸುನಿಲ್ ಹೆಗ್ಡೆ, ಗುರುಪ್ರಸಾದ್, ಡಿಡಿ, ಶ್ರುತಿ, ತೃಪ್ತಿ, ಅಕ್ಷತಾ, ಮಾನವಿ, ದಿವ್ಯಾ, ಶಾಂತಲಾ.. ಹೀಗೆ ಅನೇಕರು ನಿವೇದಿತನನ್ನು ಭೇಟಿಯಾಗೋಕೆ ಹೋಗಿದ್ರು. ಆ ಸಂದರ್ಭದಲ್ಲಿ ತರಗತಿ ಮಿತ್ರರೆಲ್ಲ ಒಂದಾಗಬೇಕು ಅನ್ನೋ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿತ್ತು. ಬಳಿಕ ಮುಂದಿನ ದಿನಗಳಲ್ಲಿ ಈ ಅಭಿಪ್ರಾಯದ ಬಗ್ಗೆ ಗಂಭೀರ ಚರ್ಚೆಯಾಯ್ತು. ನಾನು, ಸ್ಟ್ಯಾನಿ ಮತ್ತು ದಾಮು ಸಾಧ್ಯವಾದಷ್ಟು ಬೇಗ ತರಗತಿ ಮಿತ್ರರ ಒಂದುಗೂಡುವಿಕೆ ಕಾರ್ಯಕ್ರಮ ಮಾಡ್ಬೇಕು ಅಂತ ನಿರ್ಧರಿಸಿದ್ದೆವು. ಅದರಂತೆ ಡಿಸೆಂಬರ್ ನಲ್ಲಿ ಡೇಟ್ ಫಿಕ್ಸ್ ಆಯ್ತು. ಜೂನ್ ನಿಂದಾಚೆಗೆ ನಾಲ್ಕೈದು ತಿಂಗಳುಗಳ ಕಾಲ ಈ ಬಗ್ಗೆ ಗಂಭೀರ ಚರ್ಚೆ, ಅಭಿಪ್ರಾಯ ಸಂಗ್ರಹ ಎಲ್ಲವೂ ಆಯ್ತು. ನಾನು ಮತ್ತು ದಾಮು ಕಾರ್ಯಕ್ರಮದ ಬಗ್ಗೆ ರೂಪುರೇಷೆ ತಯಾರಿಸಿದೆವು. ನಂತ್ರ ಅದನ್ನು ಸ್ಟ್ಯಾನಿಗೆ ವಿವರಿಸುತ್ತಿದೆವು. ಜೊತೆಗೆ ಅಕ್ಷತಾ ಮತ್ತು ದೀಕ್ಷಾ ಜೊತೆಗೂ ಚರ್ಚೆ ಮಾಡಿದ್ವಿ..



ಸತತ ಪ್ರಯತ್ನದ ನಂತ್ರ ಬಹುತೇಕರ ಕಾಂಟ್ಯಾಕ್ಟ್ ನಂಬರ್ ಗಳನ್ನು ಕಲೆಕ್ಟ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆದ್ರೆ ಬೆರಳೆಣಿಕೆಯ ಕೆಲವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಫೇಸ್ ಬುಕ್ ನಲ್ಲಿ 34 ಜನರ ಪ್ರೊಫೈಲ್ ದೊರಕಿದ್ದು ತುಂಬಾನೇ ಸಹಕಾರಿಯಾಯ್ತು. ಬಹುತೇಕರು ಆರಂಭದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗ್ತೀನಿ ಅಂದ್ರೂ ಕೊನೆಗೆ ಕೈ ಕೊಟ್ರು. ಕೆಲವರು ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗೋಕೆ ಆಗ್ಲಿಲ್ಲ.. ಆದ್ರೂ ಹಾಜರಾದ ಪ್ರತಿಯೊಬ್ರೂ ಕೂಡ ಎಂಜಾಯ್ ಮಾಡಿದ್ರೂ ಅಂದ್ಕೋತೀನಿ...


ಆದ್ರೆ ಕೆಲವರು ಬರ್ಲಿಲ್ಲ ಅನ್ನೋ ಕಾರಣಕ್ಕೆ ಆ ದಿನಗಳು ಕಾರ್ಯಕ್ರಮ ಖಂಡಿತ ವಿಫಲವಾಗಲಿಲ್ಲ. ಎಲ್ಲವೂ ಚೆನ್ನಾಗಿಯೇ ಆಯ್ತು.. ಕಾರ್ಯಕ್ರಮಕ್ಕೆ ಹಾಜರಾದವರು ಪೂರ್ತಿ ಎಂಜಾಯ್ ಮಾಡಿದ್ರು. ಗೆಳೆಯರ ಜೊತೆಗೆ ಹರಟಿದ್ರು. ಕಾರಿಡಾರ್ ನಲ್ಲಿ ಸುತ್ತು ಹಾಕಿ ಸಂಭ್ರಮಿಸಿದ್ರು. ಉಪನ್ಯಾಸಕರ ಮಾತುಗಳನ್ನು ಕೇಳಿ ಖುಷಿಪಟ್ರು... ಇನ್ನು ಬಾರದೆ ಇದ್ದವರು ಅವೆಲ್ಲವನ್ನೂ ಮಿಸ್ ಮಾಡ್ಕೊಂಡ್ರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರಿಗೆ ಕೆಲವು ವಿಚಾರಗಳು ಬೇಸರ ಉಂಟುಮಾಡಿರಬಹುದು. ಆದ್ರೆ ಯಾರಿಗೂ ಹರ್ಟ್ ಮಾಡೋಕೆ ಖಂಡಿತ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಎಲ್ರೂ ಖುಷಿಯಾಗಿರ್ಬೇಕು, ಎಲ್ರೂ ಎಂಜಾಯ್ ಮಾಡ್ಬೇಕು ಅಂತ ಮಾತ್ರ ಅಂದ್ಕೊಡ್ವಿ....



ಎರಡು ದಿನಗಳ "ಆ ದಿನಗಳು"" ಕಾರ್ಯಕ್ರಮ ಮನಸ್ಸಲ್ಲಿ ಅಚ್ಚಳಿಯದೆ ನಿಂತಿದೆ. ಅದರ ನೆನಪುಗಳೂ.. ಬಹುಷ ಮುಂದಿನ ವರ್ಷ ಮತ್ತೊಮ್ಮೆ ಇದೇ ಡಿಸೆಂಬರ್ ನಲ್ಲಿ ಸಾಧ್ಯವಾದ್ರೆ ಎಲ್ರೂ ಸೇರೋಣ.. ಹರಟೋಣ.. ತರಗತಿಯಲ್ಲಿ ಕುಳಿತು ಪಾಠ ಕೇಳೋಣ..

ಸುನಿಲ್....